ಗ್ವಾಂ-
	ಅಮೇರಿಕದ ಸಂಯುಕ್ತಸಂಸ್ಥಾನಗಳ ಅಧೀನದಲ್ಲಿರುವ ಒಂದು ದ್ವೀಪ. ಪಶ್ಚಿಮ ಪೆಸಿಫಿಕ್‍ಸಾಗರದಲ್ಲಿರುವ ಮೇರಿಯಾನ ದ್ವೀಪಗಳಲ್ಲಿ ಅತ್ಯಂತ ದೊಡ್ದದು ಮತ್ತು ಜನಭರಿತವಾದದ್ದು. ಸ್ಯಾನ್ ಫ್ರಾನ್ಸಿಸ್ಕೋದಿಂದ ಪಶ್ಚಿಮಕ್ಕೆ 600ಮೈ. ದೂರದಲ್ಲಿ ಹೋನೊಲೂಲೂವಿಗೆ 3,340ಮೈ. ಪಶ್ಚಿಮದಲ್ಲಿ, ಮನಿಲಕ್ಕೆ 1,500ಮೈ. ಪೂರ್ವದಲ್ಲಿ, ಉ.ಅ. 1326' ಮತ್ತು ಪೂ. ರೇ. ಮೇಲೆ ಇದೆ. ವಿಸ್ತೀರ್ಣ ಚ.ಮೈ. ಜನಸಂಖ್ಯೆ 44,892 ಈ ದ್ವೀಪದ ಉದ್ದ  30-32 ಮೈ. ಅಗಲ 4-10ಮೈ. ರಾಜಧಾನಿ ಆಗಾನ್ಯಾ (1827).

	ಗ್ವಾಂ ದ್ವೀಪದ ಉತ್ತರ ಭಾಗ ಸುಣ್ಣ ಕಲ್ಲಿನಿಂದ ಕೂಡಿದ ಪ್ರಸ್ಥಭೂಮಿ. ಇಲ್ಲಿಯ ಸರಾಸರಿ ಎತ್ತರ ಸಮುದ್ರಮಟ್ಟದಿಂದ 500'. ಈ ದ್ವೀಪದ ದಕ್ಷಿಣ ಭಾಗ ಎತ್ತರ, ಅಗ್ನಿಪರ್ವತ ಪ್ರದೇಶಗಳಿಂದ ಕೂಡಿದೆ. ಇಲ್ಲಿಯ ಬೆಟ್ಟಗಳ ಎತ್ತರ ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 1,000'. ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹೆಚ್ಚು ಎತ್ತರವಾದ ಬೆಟ್ಟಗಳಿವೆ. ಅವುಗಳಲ್ಲಿ ಮುಖ್ಯವಾದವು ಲಾಮ್ಲಾನ್ (1,334) ಜಮುಲಾಂಗ್ ಮಾಂಗ್ಲೋ (1,086) ಬೊಲಾನೋಸ್ (1,220) ಮತ್ತು ಸಸಲಾಗ್ವಾನ್ (1,109)

	ಇಲ್ಲಿಯದು ಉಷ್ಣವಲಯದ ಹಿತಕರ ವಾಯುಗುಣ. ಉಷ್ಣತೆ 70 ಫ್ಯಾ-90ಫ್ಯಾ. (20ಸೆಂ.-32ಸೆಂ) ಮಳೆ 95”. ಮೇ-ಜೂನ್ ಮಳೆಗಾಲ. ಮುಕ್ಕಾಲು ಭಾಗ ಮಳೆ ಬೀಳುವುದು ಆಗಲೇ. ಗ್ವಾಂ ದ್ವೀಪದಲ್ಲಿ ಚಂಡಮಾರುತಗಳ ಹಾವಳಿ ಬಹಳ.

	ಇಲ್ಲಿಯ ಜನ ಚಾಮಾರ್ ಬುಡಕಟ್ಟಿನವರು. ಇವರು ಇಂಡೋನೇಷ್ಯದ ಮೂಲ ಬುಡಕಟ್ಟಿಗೆ ಸೇರಿದವರು. ಇಲ್ಲಿಯ ಜನರ ಭಾಷೆ ಚಾಮರೋ. ಇದು ಮೈಕ್ರೋನೇಷ್ಯನ್ ಉಪ-ಭಾಷೆಯಲ್ಲ. ಸ್ವಂತ ವ್ಯಾಕರಣ ಮತ್ತು ಶಬ್ದಕೋಶ ಇರುವ ಭಾಷೆಯದು. ರೋಮನ್ ಕ್ಯಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಈ ದ್ವೀಪದ ಅನೇಕ ಭಾಗಗಳು ನಾಶವಾಗಿದ್ದವು. ಅವುಗಳ ಪುನರ್‍ನಿರ್ಮಾಣವಾಗಿದೆ.

	ಫರ್ಡಿನೆಂಡ್ ಮೆಗೆಲಾನ್ ಈ ದ್ವೀಪವನ್ನು 1521ರಲ್ಲಿ ಕಂಡುಹಿಡಿದನೆಂದು ನಂಬಲಾಗಿದೆ. ಇಲ್ಲಿಯ ಜನಾಂಗ ಕ್ಷೀಣಿಸುವುದಕ್ಕೆ ಸಿಡುಬು, ಇನ್‍ಫ್ಲುಯೆಂಜû ರೋಗಗಳು ಮತ್ತು ಪದೇ ಪದೇ ಸಂಭವಿಸುತ್ತಿದ್ದ ಯುದ್ಧಗಳು ಮುಖ್ಯ ಕಾರಣಗಳು. ಈದ್ವೀಪ 1898ರ ವರೆಗೆ ಸ್ಪೇನಿನ ಅಧೀನದಲ್ಲಿದ್ದು ಅಮೇಲೆ ಅಮೇರಿಕದ ವಶವಾಯಿತು. 1944ರಲ್ಲಿ ಸ್ವಲ್ಪ ಕಾಲ ಜಪಾನರು ಇದನ್ನು ವಶಪಡಿಸಿಕೊಂಡಿದ್ದರು. ಆಮೇಲೆ ಇದು ಮತ್ತೆ ಅಮೇರಿಕದ ವಶವಾಯಿತು.

	ಗ್ವಾಂ ದ್ವೀಪಕ್ಕೆ ಅಮೆರಿಕದ ಅಧ್ಯಕ್ಷನಿಂದ ನೇಮಿಸಲ್ಪಟ್ಟ ರಾಜ್ಯಪಾಲನಿದ್ದಾನೆ. ಪ್ರಜೆಗಳಿಂದ ಚುನಾಯಿತವಾದ ವಿಧಾನಸಭೆಯಿದೆ. ಗ್ವಾಂ ದ್ವೀಪದಿಂದ ಹೋನೊಲೂಲೂ, ಮನಿಲ, ಓಕಿನಾವಾಗಳಿಗೆ ವಾಯುಮಾರ್ಗಗಳಿವೆ. ದ್ವೀಪದ ಮುಖ್ಯ ಸ್ಥಳಗಳಿಗೆ ರಸ್ತೆಯೂ ಜಲಮಾರ್ಗಗಳೂ ಇವೆ. ಗ್ವಾಂ ದ್ವೀಪ ಅಮೆರಿಕದ ಮುಖ್ಯ ನೌಕಾ ನೆಲೆ. 

	ಧಾನ್ಯ, ಬಾಳೆಹಣ್ಣು, ಕಿತ್ತಳೆ, ಕಲ್ಲಂಗಡಿ, ಕುಂಬಳ, ಮೊಟ್ಟೆ, ಪೈನಾಪಲ್, ಕೊಬ್ಬರಿ, ಭತ್ತ, ಕಾಫಿ ಇಲ್ಲಿಯ ಮುಖ್ಯ ಉತ್ಪನ್ನಗಳು ದಟ್ಟವಾದ ಕಾಡಿನಲ್ಲಿ ಹಡಗು ನಿರ್ಮಾಣಕ್ಕೆ ಮರ ದೊರಕುತ್ತದೆ. ಹಂದಿ, ದನ, ಮೇಕೆಗಳನ್ನು ಸಾಕುತ್ತಾರೆ. ಅಮೆರಿಕದಿಂದ ಹಲವು ಸರಕುಗಳು ಆಮದಾಗುತ್ತವೆ.

	ಇಲ್ಲಿ ಫ್ರಾಥಮಿಕ ಶಿಕ್ಷಣ ಕಡ್ಡಾಯ. 1952ರಲ್ಲಿ ಆಗಾನ್ಯಾದಲ್ಲಿ ಗ್ವಾಂ ಕಾಲೇಜು ಸ್ಥಾಪಿತವಾಯಿತು. 1960ರಲ್ಲಿ ಇದಕ್ಕಾಗಿ ಪ್ರತ್ಯೇಕ ಕ್ಷೇತ್ರವೊಂದನ್ನು ಮಾಂಗಿಲಾವೊದಲ್ಲಿ ನಿರ್ಮಿಸಲಾಯಿತು.
(ಎಂಎಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ